ಸಂಗ್ರಹಗಳು

ಹೃದಯವೀಣೆ ಮಿಡಿಯುವಾಗ

ವ್ಯಾಮೋಹ

ಕುಡಿಮೀಸೆಯ
ಹುಡುಗನ ಕಿರುನೋಟ
ನನ್ನ ಮೇಲೆ ಬಿದ್ದಾಗಲೇ
ಕನ್ನಡಿಯ ಮೇಲೆ
ನನಗೆ ವ್ಯಾಮೋಹ
ಶುರುವಾಗಿದ್ದು !

ರೂಪಾಂತರ

ಅವನಿಗೆ ಹೇಳದೇ ಉಳಿದಿಹ
ಮನದ ಅನಾಥ ಭಾವನೆಗಳು
ಇಂದು ಕವಿತೆಯಾಗಿ
ರೂಪಾಂತರಗೊಳ್ಳುತಿವೆ!

ಮನದ ಭ್ರಮೆ

ಕವಲೊಡೆದ ದಾರಿಯಲಿ
ನಾ ಒಬ್ಬಳೇ ನಡೆದರೂ
ಮನ ನುಡಿಯುತಿದೆ ನಲ್ಲ
ನೀನಿಲ್ಲೇ ಇರುವೆ
ಸುಳಿ ಗಾಳಿಯಾಗಿ
ನಾ ನಡೆವ ದಾರಿಯಾಗಿ!

ರುಕ್ಮಿಣಿ ಎನ್.

Advertisements