ಸಂಗ್ರಹಗಳು

ಸಂದರ್ಶನ : ಪಂಜು ಬಳಗದೊಂದಿಗೆ ಪ್ರೇಮಿಗಳ ದಿನದ ವಿಶೇಷ ಸಂಚಿಕೆಗಾಗಿ ನಡೆಸಿದ ಮಾತುಕತೆಯ ತುಣುಕುಗಳು

ಪಂಜು: ಪ್ರೀತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ರುಕ್ಮಿಣಿ ನಾಗಣ್ಣವರ : ಎರಡು ಮನಗಳ ನಡುವಿನ ಅನನ್ಯ ಭಾವ, ನಾನೇ ನೀನು ನೀನೇ ನಾನು ಎನ್ನುವ ಅಪೂರ್ವ ಬಂಧನ. ಹೃದಯ ಸಂಗಮಗಳ ಸೇತುವೆ ಈ ಪ್ರೀತಿ..
ಪ್ರೀತಿ ಹೃದಯಗಳ ಭಾವಗೀತೆ..

ಪಂಜು: ಈ ವಿಶೇಷ ದಿನದಲ್ಲಿ ಏನಾದರು ಸಂದೇಶ ಹೇಳಲು ಬಯಸ್ತೀರ?

ರುಕ್ಮಿಣಿ ನಾಗಣ್ಣವರ:
ನವ ಪೀಳಿಗೆಗೊಂದು ಮಾತು: ಪ್ರೀತಿ ಯುವ ಪರ್ವದಲ್ಲಿ ಕಾಮನ್ ಅಂತ ತಿಳಿದು ಟೈಂ ಪಾಸ್ ಲವ್ ಅಂತೆಲ್ಲಾ ಮಾಡೋಕೆ ಹೋಗಿ ನಿಮ್ಮ ಅಮೂಲ್ಯ ಸಮಯವನ್ನು ವೇಸ್ಟ್ ಮಾಡಬೇಡಿ..ಯಾರನ್ನಾದರು ಮನಸಾರೆ ಇಷ್ಟಪಟ್ಟಿದ್ದರೆ ಅವರನ್ನು ಪಡೆದುಕೊಳ್ಳಲು ನಿಮ್ಮೆಲ್ಲಾ ಎಫರ್ಟ್ ಕೊಡಿ. ಮದುವೆ ಎನ್ನುವ ಬಂಧನದಲ್ಲಿ ಒಂದಾಗಿ. ನೀವು ಮನಸ್ಸು ಮಾಡಿದ್ದಲ್ಲಿ ಎಲ್ಲವೂ ಸಾಧ್ಯ. ಪ್ರೀತಿಗೆ ಜಾತಿ ಧರ್ಮ ಅಡ್ಡ ಬರಲ್ಲವಂತೆ. ಆದ ಕಾರಣ ಪ್ರೀತಿಯ ಮೂಲಕ ಜಾತಿಯ ನಿರ್ಮೂಲನೆ ನಿಮ್ಮಿಂದ ಆಗಬೇಕು. ಪ್ರೀತಿಸಿ ಪ್ರೀತಿಸಲು ಬಿಡಿ..

ಪಂಜು: ಈಗಿನ ಕಾಲದ ಪ್ರೀತಿ ಬಗ್ಗೆ ಒಂದೆರಡು ಮಾತು ಹೇಳಿ..

ರುಕ್ಮಿಣಿ ನಾಗಣ್ಣವರ: ಮೊದಲಿನ ಕಾಲದಲ್ಲಿ ಸಂಪರ್ಕ ಸಾಧನಗಳು ಇರಲಿಲ್ಲ. ಪ್ರಿಯಕರನ ನೋಡಬೇಕು ಮಾತನಾಡಬೇಕು ಅಂದ್ರೆ ತುಂಬಾ ಟೈಮ್ ಬೇಕಿತ್ತು. ಪ್ರೀತಿಯ ಭದ್ರ ಬುನಾದಿ ಆಗಿತ್ತು ಅಂತ ಹೇಳಬಹುದು. ತಂತ್ರಜ್ಞಾನ ಮುಂದುವರೆದಿರೋ ಪ್ರಚಲಿತ ದಿನಗಳಲ್ಲಿ ಪ್ರೀತಿ ಜಸ್ಟ್ ಹಲೋ ಅಂದ ಹಾಗೆ. ನೈಜ ಪ್ರೀತಿಯನ್ನು ಹುಡುಕುವುದು ತುಂಬಾ ಕಷ್ಟ. ಹಾಗಂತ ನೈಜ ಪ್ರೀತಿಗಳಿಲ್ಲ ಅಂತಲ್ಲ. ಇವೆ. ಮನಸ್ಸು ಚಂಚಲಗೊಳ್ಳುವ ಸಾಧ್ಯತೆಗಳು ಜಾಸ್ತಿ ಇವತ್ತಿನ ದಿನಗಳಲ್ಲಿ.

ನಾರಾಯಣ-ಸುಧಾ ಮೂರ್ತಿ ಕಾಲ ಇದಲ್ಲ ಅಣ್ಣ..
ದುಡ್ಡು ಸೌಂದರ್ಯ ಇಂದಿನ ಪ್ರೀತಿಯ ಗುಟ್ಟಾಗಿಬಿಟ್ಟಿದೆ.ನಾರಾಯಣ ಮೂರ್ತಿಯವರು ಸುಧಾ ಮೇಡಂ ಕಡೆ ದುಡ್ಡು ತಕ್ಕೊಂಡಿದ್ದನ್ನೆಲ್ಲಾ ಲೆಕ್ಕ ಇಟ್ಟಿದ್ದಾರಂತೆ. ಅಂತಹ ಪ್ರಾಮಾಣಿಕ ಕಾಲ ಅದು. ದುಡ್ಡಿರೋ ಹುಡುಗೀನ/ ಹುಡುಗನ್ನ ಎಟಿಎಂ ತರಹ ಯೂಜ್ ಮಾಡೋ ಕಾಲ ಬಂದುಬಿಟ್ಟಿದೆ. ಆಗಿನ ಕಾಲದ ಪ್ರೀತಿ ಯಶಸ್ವಿಯಾಗದೆ ಹೋದ್ರು ಮನದಲ್ಲೇ ಅವರ ಬಗ್ಗೆ ಗೌರವ ಇರ್ತಿತ್ತು. ಆರಾಧಿಸುತ್ತಿದ್ದರು.

ಪಂಜು: ಒಂದು ಹೆಣ್ಣಾಗಿ ನಿಮ್ಮ ಹುಡುಗ ಹೇಗಿರಬೇಕು ಅಂತ ಬಯಸ್ತೀರ?

ರುಕ್ಮಿಣಿ ನಾಗಣ್ಣವರ: ನನ್ನೆಲ್ಲಾ ಏಳಿಗೆಗೂ ಅವನೊಬ್ಬ ಬೆನ್ನುಲುಬಾಗಿ ನಿಲ್ಲಬೇಕು, ದುಡ್ಡಿನ ಆಸೆ ಇರಬಾರದು. ಮಾನವೀಯತೆಯಲ್ಲಿ, ಸಂಬಂಧಗಳಿಗೆ ಪ್ರಾಮುಖ್ಯತೆ ಕೊಡುವ ಉದಾತ್ತ ಮನಸ್ಸಿನವನಾಗಿರಬೇಕು. ಅವನೊಬ್ಬ ಆಶಾವಾದಿಯಾಗಿರಬೇಕು. ನನಗೆ ಅವನೊಬ್ಬ ಆದರ್ಶವಾದಿಯಾಗಿರಬೇಕು. ಎಂತಹುದೇ ಸಂದರ್ಭ ಬಂದರೂ ನನ್ನ ಹೆಗಲಿಗೆ ಹೆಗಲು ಕೊಡಬೇಕು..

ಎಲ್ಲದಕ್ಕೂ ಮೀರಿ ಇತರ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಅವನಾಗಿರಬೇಕು..

ಪಂಜು : ತುಂಬಾ ಧನ್ಯವಾದಗಳು.. ನಿಮ್ಮ ಕನಸಿನ ಹುಡುಗ ಸಿಗಲಿ.. ಪಂಜುವಿಗಾಗಿ ತಮ್ಮ ಸಮಯ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.. ಶುಭವಾಗಲಿ..

ಇನ್ನಿತರರ ಸಂದರ್ಶನದ ಸವಿಯನ್ನು ಸವಿಯಲು ಕ್ಲಿಕ್ಕಿಸಿ: http://www.panjumagazine.com/?p=785

Advertisements