ಸಂಗ್ರಹಗಳು

ಮನಸ್ಸು ಒಂಟಿಯಾಗಿ (೩)

ಮುಗ್ಧ ಮನಸ್ಸಿಗೆ
ಕೆಲವು ಸತ್ಯಗಳು
ಗೊತ್ತಿದ್ದರೂ
ಸತ್ಯದ ಕಠೋರತೆಯನ್ನು
ಸ್ವೀಕರಿಸಲು
ನಿರಾಕರಿಸಿ
ತನ್ನಲ್ಲೇ ತಾನು
ತೊಳಲಾಡುತ್ತದೆ…

ರುಕ್ಮಿಣಿ ಎನ್.

ಮನಸ್ಸು ಒಂಟಿಯಾಗಿ (೨)

ಅಂದು ಪ್ರಪಂಚವಾದವರು
ಇಂದು ಶೂನ್ಯರೆನಿಸಿಹರು
ಎಲ್ಲ ನಾಟಕೀಯ ಜನರು
ಮನಸ ದಾಳವಾಗಿಸಿ
ಆಟ ಮುಗಿಸಿಹರು
ಯಾರನಿಲ್ಲಿ ಯಾರು ಬಲ್ಲರು…