ಸಂಗ್ರಹಗಳು

ಭಾವಚಿತ್ರ (೨)

Bhavachitra

ಮಾರುದ್ದ ಈ ಜೀವನ
ಗುರಿಯ ದಾರಿ ಹಿಡಿದು
ನಡೆಯುತಿರುವೆ ನಾ ಒಂಟಿಯಾಗಿ
ನನ್ನ ಬಾಳ ಭಾರ ಹೊತ್ತು
ನಡೆಯುತಲಿರುವೆ
ಕನಸಿನ ಮಂಜಿಲು
ಇಲ್ಲೆಲ್ಲೋ ಇರುವಂತೆ
ನಡೆದಷ್ಟು ದೂರವೇ ಓಡುತಿದೆ
ಓಡಲಿ
ಛಲ ಬಿಡದ ಹೆಣ್ಣು ನಾನು
ಕಷ್ಟ ಸಂಕಟಗಳ ಮೆಟ್ಟುತ
ನಡೆಯುತಲೇ ಇರುವೆ
ನನ್ನ ಗುರಿ ಮುಟ್ಟುವ ತನಕ

ರುಕ್ಮಿಣಿ ಎನ್.

 

ಚಿತ್ರಕೃಪೆ: ಅಂತರ್ಜಾಲ

Advertisements

ಭಾವಚಿತ್ರ (೧)

374316_555444724501050_1972961305_n

ಕಾರ್ಮೋಡ ಕವಿದ ಆ
ಆಗಸದತ್ತ ದೃಷ್ಟಿ ನೆಟ್ಟು
ತೊರೆದೆನ್ನ ಹೊರಟು
ಹೋದೆಯಲ್ಲೆನುತ
ತನ್ನೆರಡೂ ಕೈಗಳನ್ನು
ಚಾಚಿ ಬಿಕ್ಕಿ ಬಿಕ್ಕಿ
ಅವಳು ಅಳುತಿರಲು
ಆ ಮೋಡಗಳೆದೆಯನ್ನು
ಸೀಳುತ ಬಂದನು ಹುಡುಗ
ತನ್ನವಳ ಕಣ್ಣೊರೆಸಲು…

ರುಕ್ಮಿಣಿ ಎನ್.

ಚಿತ್ರಕೃಪೆ: ಅಂತರ್ಜಾಲ