ಸಂಗ್ರಹಗಳು

ನೆನಪಿನ ದೋಣಿಯಲಿ (೨)

ಬೇಕಿರುವುದನ್ನು
ನೆನಪಿಡದೆ
ಬೇಡದಿರುವುದನ್ನೇ
ನೆನಪಿಡುತ್ತೇನೆಂದು
ಮನಸಿನ ಜೊತೆ
ಸೆಣಸಾಡುವುದಲ್ಲ
ಈ ಅಧಿಕಪ್ರಸಂಗಿ
ಮೆದುಳು…

ರುಕ್ಮಿಣಿ ಎನ್

Advertisements

ನೆನಪಿನ ದೋಣಿಯಲಿ (೧)

ಹಳೆ ಡೈರಿಯ ಕೊನೆಯ
ಮೂಲೆಯಲಿ ಹೊಸದಾಗಿ ಸೇರಿಸಿದ
ನಿನ್ನ ಹಳೆ ನಂಬರ್ ಮೇಲೆ
ಕಣ್ಣಾಡಿಸಿದಾಗ
ಬತ್ತಿ ಹೋದ ನಿನ್ನೆಯ
ನಿನ್ನ ನೆನಪುಗಳೆಲ್ಲ
ಮತ್ತೆ ಹಸಿರಾಗಿ
ಮಿಂಚುವ ಕಣ್ಣಂಚಲಿ
ಕಂಬನಿ ಹೆಪ್ಪುಗಟ್ಟಿತು!