ನನ್ನ ಗೆಳೆಯ ಮುಂಬೈ

ಪರಿಚಯವಾದ ಮೊದಲ
ದಿನದಿಂದಲೇ ನನ್ನ ಮೇಲೆ
ಒಲವು ಶುರುವಾಯಿತು ನಿನಗೆ

ಒಂಟಿ ನಾನೆಂದು ನೆಲೆಸಲೊಂದು
ನಿನ್ನ ಹೃದಯದಿ ಜಾಗ ಕೊಟ್ಟೆ
ಕಣ್ಣ ರೆಪ್ಪೆಯಾಗಿ ನೀ ಕಾವಲಾದೆ

ನಿನ್ನ ಜನರನೆನಗೆ ಪರಿಚಯಿಸಿದೆ
ನನ್ನ ಒಂಟಿತನವ ನೀ ಮರೆಸಿದೆ
ನಿನ್ನ ಹೃದಯ ಸಿರಿಯ ಮೆರೆಸಿದೆ

ನನ್ನ ಭವಿಷ್ಯದ ಕಣ್ಣು ನೀನಾದೆ
ಕನಸು ಕಾಣುವುದನ್ನು ಹೇಳಿಕೊಟ್ಟೆ
ಆ ಕನಸುಗಳಿಗೆ ಸ್ಪೂರ್ತಿ ನೀನಾದೆ

ಮನಸಿಲ್ಲದ ಮನಸಿಗಾಗಿ ಅತ್ತು
ನಿದಿರೆಗೆಟ್ಟಾಗ ಹೃದಯ ತೊಟ್ಟಿಲಲಿ
ತೂಗಿ ಹಾಯಾಗಿ ನನ್ನ ಮಲಗಿಸಿದೆ

ಗೊತ್ತು ನಾನೆಂದರೆ ನಿನಗೆ ಪ್ರಾಣ
ಯಾವ ಷರತ್ತುಗಳಿಲ್ಲದೆ ನೀ ನನ್ನ
ಹುಚ್ಚನಂತೆ ಮೋಹಿಸುತಿರುವೆ

ನಿನ್ನನ್ನೆಂದಿಗೂ ನಾ ಪ್ರೀತಿಸಲಾರೆ
ನನ್ನವನ ಜಾಗದಲ್ಲಿ ನಿನ್ನ ನೋಡಲಾರೆ
ಮನಸಾರೆ ನನ್ನ ಕ್ಷಮಿಸುಬಿಡು ಗೆಳೆಯ

ಎರಡು ವರುಷಗಳಿಂದ ನನ್ನವನು
ನನಗಾಗಿ ಹಾತೊರೆದು ಕಾದಿಹೆನು
ಸೇರಬೇಕಿದೆ ಅವನ ಬಾಹುಭುಜಗಳನು

ಕಾಯಿಸಿ ಸತಾಯಿಸಿ ವಿರಹ ವೇದನೆ ನೀಡಿ
ಮನ ನೋಯಿಸಿದೆ ಈಗ ಹೋಗಲೇಬೇಕು
ಅವನಿಗೆ ನನ್ನ ಅವಶ್ಯಕತೆ ತುಂಬ ಇದೆ

ನೀ ನೀಡಿದ ಮಧುರ ಕ್ಷಣಗಳೆಲ್ಲವನ್ನೂ
ನಾ ಕಾದಿಡುವೆ ನಿನ್ನ ನೆನಪಿಗಾಗಿ
ಅಚ್ಚಳಿಯದ ನಮ್ಮ ಸ್ನೇಹದ ಕುರುಹಾಗಿ

ನನ್ನವರು ನನಗಾಗಿ ಕಾಯುತಿರುವರು
ಹೋಗಿ ಬರುವೆ ಗೆಳೆಯ ನಸೀಬಿದ್ದರೆ
ಮತ್ತೆ ಸಿಗೋಣ ಮಿಸ್ ಯೂ ಮುಂಬೈ

ಇಂತಿ ನಿನ್ನ ಕನ್ನಡ ಗೆಳತಿ
ರುಕ್ಮಿಣಿ ಎನ್.

2 thoughts on “ನನ್ನ ಗೆಳೆಯ ಮುಂಬೈ

  1. ಮುಂಬೈ ಮೇರಿ ಜಾನ್…. ಅಂತ ಸುಮ್ಮನೆ ಹಾಡಿದ್ದಾರೆಯೇ? ನಿಮ್ಮ ಕವನ ಓದಿ ಚೌಪಾಟಿಯ ಪಾನಿ ಪೂರಿ ಮತ್ತು ಫಿಲಂ ಸಿಟಿಯ ಸಿನಿಮಾ ದುನಿಯಾ ನೆನಪಾದವು.

ನಿಮ್ಮ ಟಿಪ್ಪಣಿ ಬರೆಯಿರಿ